ನವದೆಹಲಿ: ಪುಲ್ವಾಮಾ ದಾಳಿ ನಂತರ ಭಾರತ-ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಸುಖಾಸುಮ್ಮನೆ ಭಾರತದ ತಂಟೆಗೆ ಬರುವ ಮೂಲಕ ಪಾಕ್ ಭಾರೀ ಬೆಲೆ ತೆತ್ತಿದೆ. ಭಾರತ ತೆಗೆದುಕೊಂಡು ಕೆಲ ಕ್ರಮದಿಂದ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದ ದರ ಕಳೆದ ನಾಲ್ಕು ವರ್ಷದಲ್ಲೇ ಅತ್ಯಧಿಕ ಮಟ್ಟ ತಲುಪಿದೆ. ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನದ ಆರ್ಥಿಕತೆಗೆ ಭಾರತ ಹೊಡೆತ ನೀಡುವ ಕ್ರಮಕ್ಕೆ ಮುಂದಾಗಿತ್ತು. ಪಾಕ್ನಿಂದ ಆಮದಾಗುವ ವಸ್ತುಗಳಿಗೆ ಶೇ.200 ತೆರಿಗೆ ವಿಧಿಸುವ ದಿಟ್ಟ ಕ್ರಮವನ್ನು ಭಾರತ ಸರ್ಕಾರ ತೆಗೆದುಕೊಂಡಿದೆ. […]
↧