ವಾಷಿಂಗ್ಟನ್: ಚೀನಾದ ಆರ್ಥಿಕ ಅಭಿವೃದ್ಧಿಗೆ ತಯಾರಿಕಾ ಕ್ಷೇತ್ರದ ಕೊಡುಗೆ ಪ್ರಮುಖವಾದುದು. ವಿಶ್ವಮಟ್ಟದಲ್ಲಿ ಭಾರತಕ್ಕಿಂತ ವೇಗವಾಗಿ ಚೀನಾ ನಾಗಾಲೋಟ ನಡೆಸಲು ಈ ಕ್ಷೇತ್ರದಲ್ಲಿ ಅದು ತೋರಿದ ಗಣನೀಯ ಪ್ರಗತಿಯೇ ಕಾರಣ. ಸ್ಥಳೀಯ ಚೀನೀ ಕಂಪನಿಗಳಷ್ಟೇ ಅಲ್ಲ ವಿಶ್ವದ ಅನೇಕ ರಾಷ್ಟ್ರಗಳ ಕಂಪನಿಗಳು ಚೀನಾದಲ್ಲಿ ತಯಾರಿಕಾ ಘಟಕಗಳನ್ನ ಹೊಂದಿವೆ. ಇಂತಹ ಅನೇಕ ಕಂಪನಿಗಳು ಈಗ ಚೀನಾದಿಂದ ಆಚೆ ಸೂಕ್ತ ಸ್ಥಳಗಳನ್ನು ಹುಡುಕುತ್ತಿವೆ. ಅವುಗಳ ಆಯ್ಕೆ ಪಟ್ಟಿಯಲ್ಲಿ ಭಾರತವೂ ಸೇರಿದೆ. ಅಮೆರಿಕ-ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆ(ಯುಎಸ್ಐಎಸ್ಪಿಎಫ್ – USISPF) ಎಂಬ […]
↧