ದುಬೈ: ಯುಎಇ ಭಾರತೀಯ ದಂಪತಿಗಾಗಿ ತನ್ನ ಕಾನೂನನ್ನೂ ಬದಿಗೊತ್ತಿ ಅವರ ಮಗುವಿಗೆ ಜನನ ಪ್ರಮಾಣ ಪತ್ರವನ್ನ ನೀಡಿದೆ. ಯುಎಇಯಲ್ಲಿ ಈ ವರ್ಷವನ್ನ ಇಯರ್ ಆಫ್ ಟಾಲರೆನ್ಸ್ ಅಂದ್ರೆ ಸಹಿಷ್ಣು ವರ್ಷ ಅಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಾನೂನನ್ನ ಬದಿಗೊತ್ತಿ, 9 ತಿಂಗಳ ಹೆಣ್ಣು ಮಗುವಿಗೆ ಜನನ ಪ್ರಮಾಣ ಪತ್ರ ನೀಡಲಾಗಿದೆ. ಯುಎಇ ಕಾನೂನಿನ ಪ್ರಕಾರ, ಮುಸ್ಲಿಮ್ ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯನ್ನ ವಿವಾಹ ಆಗಬಹುದು. ಆದ್ರೆ, ಮುಸ್ಲಿಮ್ ಮಹಿಳೆ, ಬೇರೆ ಧರ್ಮದ ಪುರುಷನನ್ನ ಮದುವೆಯಾಗುವಂತಿಲ್ಲ. […]
↧