ವಾಶಿಂಗ್ಟನ್: ಜಪಾನಿನಲ್ಲಿ ನಡೆಯಲಿರುವ ಜಿ-20 ಸಮಾವೇಶದ ಸಮಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಕಿಡಿ ಕಾರಿದ್ದಾರೆ. ಶೃಂಗಸಭೆಗೆ ಆಗಮಿಸುವ ಮುನ್ನ ಅವರು ಅಮೆರಿಕಾದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಮಾತನಾಡಿರುವ ಟ್ರಂಪ್ “ಭಾರತ ದೇಶ ಅಮೆರಿಕಾದ ಸರಕುಗಳ ಮೇಲೆ ಹೇರಿರುವ ಸುಂಕದ ಭಾರವನ್ನು ಇಳಿಸಬೇಕು, ಈ ಬಗ್ಗೆ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಶುಕ್ರವಾರ ಮಾತನಾಡಲಿದ್ದೇನೆ,” ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಬರೆದುಕೊಂಡಿರುವ ಟ್ರಂಪ್, “ಶೃಂಗಸಭೆ ವೇಳೆ ಮೋದಿಯವರ ಜತೆ ಮಾತನಾಡುತ್ತೇನೆ. […]
↧