ನವದೆಹಲಿ(ಅ.01): ಅತ್ಯಾಚಾರ ಆರೋಪ ಎದುರಿಸುತ್ತಿರುವ ನೇಪಾಳ ಸ್ಪೀಕರ್ ಕೃಷ್ಣ ಬಹದೂರ್ ಮಹರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫೆಡರಲ್ ಪಾರ್ಲಿಮೆಂಟ್ ಸೆಕ್ರೆಟರಿಯಟ್ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ತಮ್ಮ ಮೇಲೆ ನೇಪಾಳ ಸಂಸತ್ತಿನ ಸ್ಪೀಕರ್ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್ ಕೃಷ್ಣ ಬಹದೂರ್ ಮಹರಾ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಹಮ್ರೋ ಕುರಾ ಆನ್ಲೈನ್ ಎಂಬ ನ್ಯೂಸ್ ಪೋರ್ಟಲ್ನಲ್ಲಿ ಸಂತ್ರಸ್ತೆ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದರು. “ನನಗೆ ಸ್ಪೀಕರ್ ಸುಮಾರು ವರ್ಷಗಳಿಂದ ಗೊತ್ತು. […]
↧