ಹರಾರೆ: ಮೊಸಳೆ ಎಂದರೆ ಸಾಕು ಜನ ಹೌಹಾರುತ್ತಾರೆ. ಅಂಥದ್ದರಲ್ಲಿ ಮೊಸಳೆ ಬಾಯಿಗೆ ಗೆಳತಿ ಸಿಲುಕಿದ್ದಾಳೆ ಎಂದರೆ? ದಿಕ್ಕೇ ತೋಚದಿರಬಹುದು. ಆದರೆ ಆಕೆ ಹಾಗಲ್ಲ, ಧೈರ್ಯಗೆಡದೆ ಮೊಸಳೆಗೇ ಬಡಿದು, ಗೆಳತಿಯನ್ನು ರಕ್ಷಿಸಿ ದಿಟ್ಟತನ ಮೆರೆದಿದ್ದಾಳೆ. ಈ ಘಟನೆ ನಡೆದಿರುವುದು ಜಿಂಬಾಬ್ವೆಯ ಸಿಂಡ್ರೆಲಾ ಎಂಬ ಗ್ರಾಮದಲ್ಲಿ. ಲಾಟೋತಾ ಮುವಾನಿ (9) ಮತ್ತು ಆಕೆಯ ಗೆಳತಿಯರಾದ ರೆಬೆಕ್ಕಾ ಮುಂಕೋಬ್ವೆ (11) ಮತ್ತು ಇತರರು, ಈಜಲು ತೆರಳಿದ್ದರು. ಸ್ವಲ್ಪ ಹೊತ್ತಿಗೆ ಲಾಟೋತಾ ಮುವಾನಿ ಭಾರೀ ಬೊಬ್ಬೆ ಹಾಕಿದ್ದು, ಆಕೆಯನ್ನು ಕಪ್ಪಾದ ಆಕೃತಿಯೊಂದು ನೀರಿನೊಳಕ್ಕೆ […]
↧