ವಾಷಿಂಗ್ಟನ್: ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನದ ಮುನ್ನವೇ ಬಿಳಿ ಗಡ್ಡಧಾರಿ ವ್ಯಕ್ತಿಯೊಬ್ಬ ಏಕಾಏಕಿ ಬ್ಯಾಂಕ್ ಗೆ ನುಗ್ಗಿ ದರೋಡೆ ಮಾಡಿದ ನಂತರ ಹಣವನ್ನು ತಂದು ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳತ್ತ ಎಸೆದು ಕ್ರಿಸ್ಮಸ್ ಶುಭಾಶಯ ಕೋರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಕುರಿತು ಕೊಲೋರಾಡೋ ಪೊಲೀಸರು ಪ್ರಕಟಣೆಯಲ್ಲಿ ಖಚಿತಪಡಿಸಿದ್ದು, ಬಿಳಿಗಡ್ಡಧಾರಿ ವೃದ್ಧ ವ್ಯಕ್ತಿಯೊಬ್ಬ ಕೊಲೋರಾಡೋದಲ್ಲಿನ ಅಕಾಡೆಮಿ ಬ್ಯಾಂಕ್ ಗೆ ನುಗ್ಗಿ ಅಪರಿಚಿತ ಆಯುಧದಿಂದ ಬೆದರಿಕೆಯೊಡ್ಡಿ ಹಣ ದರೋಡೆ ಮಾಡಿದ್ದಾನೆ. ಅಲ್ಲದೇ ಭಾರೀ ಮೊತ್ತದ […]
↧