- ಶ್ರೀಹರ್ಷ ಸಾಲಿಮಠ ಮನುಷ್ಯನ ದೇಹ ಕೋಟ್ಯಂತರ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಜೀವ ಕೋಶಗಳು ಲಕ್ಷಾಂತರ ಪರಮಾಣುಗಳಿಂದ ಮಾಡಲ್ಪಟ್ಟಿವೆ. ನಮ್ಮ ದೇಹದ ಮುಕ್ಕಾಲು ಭಾಗ ನೀರು ಮತ್ತು ಕೊಬ್ಬಿನಿಂದ ತಯಾರಾಗಿದೆ. ನಮ್ಮ ಜೀವಕೋಶಗಳಲ್ಲಿನ ಪರಮಾಣುಗಳು ಹಾಗೂ ನೀರಿನ ಕಣಗಳು ಜಲಜನಕವನ್ನು (hydrogen) ಹೊಂದಿರುತ್ತವೆ. ಜಲಜನಕವು ಸೂಜಿಗಲ್ಲಿನ ಸೆಳೆತಕ್ಕೆ ಸಿಕ್ಕಾಗ ಥೇಟ್ ಕಬ್ಬಿಣದ ಪುಡಿಯ ಹಾಗೆಯೇ ವರ್ತಿಸುತ್ತದೆ. ಜಲಜನಕದ ಅಣುಗಳು ಅಯಸ್ಕಾಂತದ ಪ್ರಭಾವಕ್ಕೆ ಒಳಗಾಗುತ್ತಿದ್ದಂತೆ ಸಾಲಾಗಿ ಸೈನಿಕರಂತೆ ಅಯಸ್ಕಾಂತದ ಗೆರೆಯ ಉದ್ದಕ್ಕೂ ನಿಂತುಬಿಡುತ್ತವೆ. […]
↧