ಪ್ಯಾರಿಸ್: ಮಹಿಳೆಯರಲ್ಲಿನ ಮುಟ್ಟು ನಿಲ್ಲುವ ಪ್ರಕ್ರಿಯೆ ಕುರಿತಂತೆ ಅಧ್ಯಯನ ನಡೆಸಿರುವ ವರದಿಯೊಂದು ಬಿಡುಗಡೆಯಾಗಿದ್ದು, ಮಧ್ಯ ವಯಸ್ಸಿನ ಮಹಿಳೆಯರು ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮುಟ್ಟು ನಿಲ್ಲುವ ಸಮಯ ವಿಳಂಬವಾಗಲಿದೆ ಎಂದು ತಿಳಿಸಿದೆ. ಅಧ್ಯಯನದ ಪ್ರಕಾರ ಸರಾಸರಿ ಎಂಬಂತೆ ವಾರದಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರಿಗಿಂತ ತಿಂಗಳಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮಹಿಳೆ ಶೇ.28ರಷ್ಟು ಮುಟ್ಟು ನಿಲ್ಲುವ ಪ್ರಕ್ರಿಯೆಯ ಅವಕಾಶ ಕಡಿಮೆ ಮಾಡಲಿದೆ ಎಂದು ಜರ್ನಲ್ ರಾಯಲ್ ಸೊಸೈಟಿಯ ಓಪನ್ ಸೈನ್ಸ್ ವರದಿ ವಿವರಿಸಿದೆ. […]
↧