ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಭಾರತ ಇನ್ನಿಲ್ಲದ ಹರಸಾಹಸ ನಡೆಸುತ್ತಿರುವಂತೆಯೇ ಆ ಯತ್ನಕ್ಕೆ ತೊಡರುಗಾಲು ಹಾಕುವುದನ್ನು ಚೀನಾ ಮುಂದುವರಿಸಿದೆ. ವಿಶ್ವಮಟ್ಟದ ಸಮಸ್ಯೆಗಳಿಗೆ ಪರಿಹಾರ ನೀಡಲು ಭದ್ರತಾ ಮಂಡಳಿ ನಿರಂತರವಾಗಿ ವಿಫಲವಾಗುತ್ತಿದ್ದರೂ ಅದರಲ್ಲಿ ಕಾಯಂ ಸ್ಥಾನ ಪಡೆಯುವ ಭಾರತದ ಬಹುದಿನಗಳ ಕನಸು ಇನ್ನೂ ಬತ್ತಿ ಹೋಗಿಲ್ಲ. ಹೊಸದಿಲ್ಲಿ ಅದಕ್ಕಾಗಿ ತನ್ನ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿದೆ. ಭಾರತದ ಪ್ರಯತ್ನಕ್ಕೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇನ್ನಷ್ಟು ವೇಗ ಸಿಕ್ಕಿದ್ದು, ಚೀನಾವನ್ನು ಚಿಂತೆಗೆ ದೂಡಿದೆ. ಭದ್ರತಾ ಮಂಡಳಿ […]
↧