ದಹಾಲ-ಖಗ್ರಬಾರಿ (ಬಾಂಗ್ಲಾದೇಶ): ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ ಬಹುದಿನಗಳ ಭೂ ಬಿಕ್ಕಟ್ಟಿಗೆ ತೆರೆಬಿದ್ದಿದ್ದು, ಎರಡೂ ರಾಷ್ಟ್ರಗಳು ಶುಕ್ರವಾರ ಮಧ್ಯರಾತ್ರಿ ಐತಿಹಾಸಿ ಭೂ ‘ವಿನಿಮಯ’ಕ್ಕೆ ಸಾಕ್ಷಿಯಾದವು. ಬಾಂಗ್ಲಾಕ್ಕೆ ಸೇರಿದ್ದರೂ ಭಾರತದ ಗಡಿಯಿಂದ ಸುತ್ತುವರೆದಿದ್ದ 111 ಪರಾವೃತ ಪ್ರದೇಶಗಳು ಹಾಗೂ ಭಾರತಕ್ಕೆ ಸೇರಿದ್ದರೂ ಬಾಂಗ್ಲಾದ ಗಡಿಯಿಂದ ಸುತ್ತುವರೆದಿದ್ದ 51 ಪರಾವೃತ ಭೂ ಭಾಗಗಳನ್ನು ಉಭಯ ರಾಷ್ಟ್ರಗಳೂ ಪರಸ್ಪರ ವಿನಿಮಯ ಮಾಡಿಕೊಂಡಿವೆ. ಸಾಂಕೇತಿಕವಾಗಿ ಧ್ವಜಾರೋಹಣದೊಂದಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಇದರೊಂದಿಗೆ ಶುಕ್ರವಾರ ಮಧ್ಯರಾತ್ರಿಯಿಂದ ಈ ಎಲ್ಲಾ 162 ಪರಾವೃತ ಭೂ […]
↧