ಅಂತಾರಾಷ್ಟ್ರೀಯ ಸೆಲೆಬ್ರಿಟಿಯೊಬ್ಬರನ್ನೇ ಅಪಹರಣ ಮಾಡಿ ಅತ್ಯಾಚಾರ ಮಾಡುತ್ತಾರೆ ಎಂದರೆ ಇನ್ನು ಸಾಮಾನ್ಯರ ಪಾಡೇನು? ಎಂದು ಆಲೋಚಿಸುವಂತಾಗಿದೆ. ಖ್ಯಾತ ಅಂತಾರಾಷ್ಟ್ರೀಯ ಗಾಯಕಿ ಡಫಿ ಕೆಲವು ವರ್ಷಗಳ ಕಾಲ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇಷ್ಟಕ್ಕು ಅವರು ಏನಾದರು ಅಂತ ಯಾರಿಗೂ ಗೊತ್ತಾಗಲಿಲ್ಲ. ಸುದೀರ್ಘ ಸಮಯದ ಬಳಿಕ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿ ತನಗೇನಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. “ನಾನು ಈ ಸಂಗತಿಯನ್ನು ನಿಮಗೆ ತಿಳಿಸಲು ಅದೆಷ್ಟು ಸಲ ಯೋಚಿಸಿದ್ದೇನೆ ಅಂತ ನೀವು ಊಹಿಸುವುದು ಕಷ್ಟ. ಆದರೆ ನಾನು ಇಷ್ಟು ಕಾಲ ಯಾಕೆ […]
↧