ಬೀಜಿಂಗ್: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಯುತ್ತಿರುವ ನಡುವೆಯೇ ನೂತನ ಸೋಂಕು ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನಾ ಲೇಖನವೊಂದು ತಿಳಿಸಿದೆ. ಕೊರೊನಾ ಸೋಂಕು ಪೀಡಿತ ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತವಾಗಿರುವ ಜತೆಗೆ ಇದು ಹಲವು ವಾರಗಳವರೆಗೆ ರೋಗಾಣು ಹರಡಲಿದೆ ಎಂದು ವಿವರಿಸಿದೆ. ಈ ಸೋಂಕು ರೋಗಾಣುವನ್ನು ನಿಗ್ರಹಿಸುವುದು ಎಷ್ಟು ಕಷ್ಟಕರ ಎಂಬುದು ತಿಳಿದು ಬಂದಿದೆ ಎಂದು ಕೊರೊನಾ ಸೋಂಕು ತಗುಲಿದ 20 ದಿನಗಳ […]
↧