ವಾಷಿಂಗ್ಟನ್: ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿ ಮುಳುಗಿರುವ ಸಂದರ್ಭದಲ್ಲಿ ಕೊಂಚ ಸಮಾಧಾನದ ಸುದ್ದಿಯೊಂದು ಹೊರಬಿದ್ದಿದೆ. ನೊವೆಲ್ ಕೊರೊನಾ ವೈರಾಣುವನ್ನು ಕೊಲ್ಲುವ ಲಸಿಕೆಯನ್ನು ಇಲಿಯ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿರುವುದಾಗಿ ಅಮೆರಿಕದ ಸಂಶೋಧಕರು ಪ್ರಕಟಿಸಿದ್ದಾರೆ. ಈ ಲಸಿಕೆಯನ್ನು ದೇಹದ ಸೀಮಿತ ಪ್ರದೇಶಕ್ಕೆ ಪ್ರಯೋಗಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಇಲಿಯ ದೇಹದಲ್ಲಿ ನಿರ್ದಿಷ್ಟ ಕೊರೊನಾ ವೈರಸ್ ಬೆಳವಣಿಗೆಯನ್ನು ತಟಸ್ಥಗೊಳಿಸುವಷ್ಟು ಮಟ್ಟಿಗಿನ ರೋಗನಿರೋಧಕ ಶಕ್ತಿ ಹೆಚ್ಚಳವಾಗಿದೆ. ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ತಯಾರಿಸಲಾಗಿರುವ ಈ ಹೊಸ ಲಸಿಕೆಗೆ ”ಪಿಟ್‌ಕೊವ್ಯಾಕ್” ಎಂದು ಹೆಸರಿಡಲಾಗಿದೆ. ”ಈ ಲಸಿಕೆ […]
↧