ಇಸ್ಲಾಮಾಬಾದ್, ಆ.20: ಭಾರತದೊಂದಿಗಿನ ಯಾವುದೇ ರೀತಿಯ ಶಾಂತಿ ಮಾತುಕತೆಗಳನ್ನು ನಡೆಸಲುಮಿಲಿಟರಿ ಸಹಮತವಿಲ್ಲದೆ ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಪ್ರಧಾನಿ ನವಾಜ್ ಷರೀಫ್, ಈ ನಿಟ್ಟಿನಲ್ಲಿ ಬಹಳ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಚುನಾಯಿತ ಸರ್ಕಾರ ನಡೆಸುವ ವಿಪಕ್ಷೀಯ ಮಾತುಕತೆಗಳಿಗೆ ಪಾಕಿಸ್ಥಾನದ ಮಿಲಿಟರಿ ಒಪ್ಪಿಗೆಯಿಲ್ಲ. ಮಿಲಿಟರಿ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಚೆನ್ನಾಗಿ ಅರಿತಿರುವ ಷರೀಫ್, ಮಿಲಿಟರಿ ಅಧಿಕಾರಿಗಳ ತಾಳಕ್ಕೆ ತಕ್ಕಂತೆಯೇ ಹೆಜ್ಜೆ ಹಾಕುತ್ತಿದ್ದಾರೆ. ಸಧ್ಯದಲ್ಲೇ ನಡೆಯಲಿರುವ ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ರ ಮಟ್ಟದ ಮಾತುಕತೆ ಹಿನ್ನೆಲೆಯಲ್ಲಿ […]
↧