ಕೇಪ್ ಕೆನವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮದ್ಯ ಒಯ್ದು ಪರೀಕ್ಷೆ ನಡೆಸಲು ಜಪಾನ್ ಮುಂದಾಗಿದೆ. ಹಾಗಂತ ಈ ಮದ್ಯವು ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಕುಡಿಯಲು ಅಲ್ಲ! ಬದಲಾಗಿ, ಭೂಮಿಯಲ್ಲಿದ್ದಾಗ ಮತ್ತು ಅಂತರಿಕ್ಷದಲ್ಲಿರುವಾಗ ಮದ್ಯದ ದ್ರವದಲ್ಲಿ ಆಗುವ ವ್ಯತ್ಯಾಸಗಳನ್ನು ಅರಿಯಲು ಜಪಾನ್‌ನ ಖ್ಯಾತ ಮದ್ಯ ಕಂಪನಿ ಮುಂದಾಗಿದೆ. ಜಪಾನ್‌ನಿಂದ ಬುಧವಾರ ಉಡಾವಣೆಗೊಂಡು ಬಾಹ್ಯಾಕಾಶ ನಿಲ್ದಾಣದ ಸೇರುವ ವ್ಯೋಮನೌಕೆಯಲ್ಲಿ ಗಗನ ಯಾತ್ರಿಗಳ ಅಗತ್ಯ ವಸ್ತುಗಳು ಸೇರಿ 10 ಸಾವಿರ ಪೌಂಡ್ಸ್ ಸಾಮಾಗ್ರಿಯನ್ನು ಭೂಮಿಯಿಂದ ಅಂತರಿಕ್ಷಕ್ಕೆ ರವಾನಿಸಲಾಗುತ್ತಿದೆ. ಇದರಲ್ಲಿ ಆರು ಮಾದರಿಯ ಮದ್ಯಗಳೂ […]
↧