ವಾಷಿಂಗ್ಟನ್, ಆ.27: ಜಗತ್ತಿನಾದ್ಯಂತ ಸಮು್ರಗಳ ಮಟ್ಟಗಳಲ್ಲಿ ಏರಿಕೆ ಕಂಡು ಬರುತ್ತಿದೆ ಹಾಗೂ ಉಪಗ್ರಹಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಮುಂದಿನ 100ರಿಂದ 200 ವರ್ಷಗಳ ಅವಧಿಯಲ್ಲಿ ಒಂದು ಮೀಟರ್ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗುವುದನ್ನು ತಪ್ಪಿಸಲಾಗದು ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ. ಗ್ರೀನ್‌ಲ್ಯಾಂಡ್ ಹಾಗೂ ಅಂಟಾರ್ಕ್ಟಿಕಾಗಳಲ್ಲಿ ಹಿಮಪದರಗಳು ಹಿಂದೆಂದಿಗಿಂತಲೂ ಅಧಿಕ ವೇಗದಲ್ಲಿ ಕರಗುತ್ತಿವೆ ಹಾಗೂ ಸಾಗರಗಳಲ್ಲಿ ತಾಪಮಾನ ಏರುತ್ತಿದೆ ಮತ್ತು ಇದು ಈ ಹಿಂದಿನ ವರ್ಷಗಳ ಅವಧಿಗಿಂತಲೂ ಅತಿ ವೇಗದಲ್ಲಿ ಹೆಚ್ಚುತ್ತಿದೆ ಎಂದವರು ವಿವರಿಸಿದ್ದಾರೆ. ಸಮುದ್ರ ಮಟ್ಟದಲ್ಲಿನ ಹೆಚ್ಚಳವು […]
↧