ಬೀಜಿಂಗ್: ಪರ್ವತಾರೋಹಿಗಳಿಗೆ ಅತಿ ಅಪಾಯಕಾರಿಯೆಂದೇ ಹೇಳಲಾಗುವ ಚೀನಾದ ಯುನಾನ್ ಪ್ರಾಂತ್ಯದ ಲಿ ಮಿಂಗ್ ಪರ್ವತಶ್ರೇಣಿಯಲ್ಲಿರುವ ಬೆಟ್ಟಗಳನ್ನು ಬರಿಗೈಯಲ್ಲಿ ಏರಿ ಸ್ವಿಜರ್ಲೆಂಡ್ನ 33ರ ಹರೆಯದ ಯುವತಿ ರಹೇಲ್ ಸ್ಚೆಲ್ಬ್ ಅಚ್ಚರಿ ಮೂಡಿಸಿದ್ದಾರೆ. ಸುಮಾರು 25 ದಿನಗಳ ಕಾಲ ಲಿ ಮಿಂಗ್ ಪರ್ವಶ್ರೇಣಿಯಲ್ಲಿರುವ ಬೆಟ್ಟಗಳನ್ನು 60 ದಾರಿಗಳ ಮೂಲಕ ಹತ್ತಿಳಿದಿದ್ದಾರೆ. ಇವುಗಳಲ್ಲಿ 65 ಅಡಿ ಎತ್ತರದ ಪರ್ವತದಿಂದ 1000 ಅಡಿ ಎತ್ತರದ ಪರ್ವತವೂ ಸೇರಿದೆ. ಬರಿಗೈಯಲ್ಲಿ ಪರ್ವತಗಳ ಬಿರುಕುಗಳನ್ನೇ ಆಧರಿಸಿ ಪರ್ವತವೇರುವ ರಹೇಲಾ ಸ್ವಿಜರ್ಲೆಂಡ್ನಲ್ಲಿ ಶಾಲಾ ಶಿಕ್ಷಕಿಯಾಗಿದ್ದು ಪರ್ವತಾರೋಹಣ ಅವರ […]
↧