ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಕೆಫೆಯೊಂದರ ಮೇಲೆ ಉಗ್ರರು ದಾಳಿ ಮಾಡಿ ಒತ್ತಾಯಾಳಾಗಿ ಇಟ್ಟುಕೊಂಡಿರುವವರಲ್ಲಿ ಭಾರತೀಯನೂ ಇದ್ದಾನೆಂದು ತಿಳಿದುಬಂದಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಕೆಫೆಯಲ್ಲಿ ಒತ್ತೆಯಾಳುಗಳಾಗಿರುವವರಲ್ಲಿ ಭಾರತೀಯ ಮಾಹಿತಿ ಸಂಸ್ಥೆಯ ವ್ಯಕ್ತಿಯೋರ್ವ ಸಿಲುಕಿರುವುದಾಗಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ರಾಯಭಾರಿ ಕಚೇರಿಗಳು ಈಗಾಗಲೇ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು. ಒತ್ತೆಯಾಳುಗಳಲ್ಲಿ ಎಷ್ಟು ಮಂದಿ ಭಾರತೀಯರು ಸಿಲುಕಿದ್ದಾರೆ ಎಂಬ […]
↧