ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಇರುವವರು ಸುಳ್ಳು ಹೇಳಬೇಡಿ ಎಂದರೆ ಅವರು ಯಾರಲ್ಲೂ ಸುಳ್ಳು ಹೇಳಬಾರದು ಎನ್ನುವ ಉಪದೇಶವಲ್ಲ. ಇದು ವೈದ್ಯರೆದುರು ಯಾವುದನ್ನೂ ಮುಚ್ಚಿಡಬಾರದು, ಸಿಕ್ಕಿಹಾಕಿಕೊಳ್ಳುತ್ತೀರಿ ಎನ್ನುವ ಎಚ್ಚರಿಕೆ. ಮಧುಮೇಹಿಗಳು ತಮ್ಮ ದೇಹವನ್ನು ಆರೋಗ್ಯವಾಗಿಡಲು ಕಟ್ಟುನಿಟ್ಟಿನ ಆಹಾರ ಪದ್ಧತಿ, ವ್ಯಾಯಾಮ, ಸೂಕ್ತ ಔಷಧಿ ಮತ್ತು ನಿಯಮಿತವಾಗಿ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ತಿಳಿಯುವ ಅಗತ್ಯವಿದೆ. ಕನಿಷ್ಠ ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿ ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಆದರೆ ಇದನ್ನು ಪಾಲಿಸುವವರ ಸಂಖ್ಯೆ ಮಾತ್ರ ಕಡಿಮೆ. ಒಂದು ವೇಳೆ ವೈದ್ಯರು […]
↧