ಲಂಡನ್, ಅ. 15: ಕ್ಯಾನ್ಸರ್‌ಗೆ ಚಿಕಿತ್ಸೆಯೊಂದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಜ್ಞಾನಿಗಳು ಆಕಸ್ಮಿಕವಾಗಿ ದೈತ್ಯ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕ್ಯಾನ್ಸರ್‌ಗೆ ಮಲೇರಿಯ ಪ್ರೊಟೀನೊಂದು ಪರಿಣಾಮಕಾರಿ ಅಸ್ತ್ರವಾಗಬಹುದು ಎನ್ನುವುದನ್ನು ಅವರು ಒಮ್ಮೆಲೆ ಪತ್ತೆಹಚ್ಚಿದ್ದಾರೆ. ಮಲೇರಿಯದಿಂದ ಗರ್ಭಿಣಿಯರನ್ನು ರಕ್ಷಿಸುವುದು ಹೇಗೆಂಬ ಬಗ್ಗೆ ಡೆನ್ಮಾರ್ಕ್‌ನ ಸಂಶೋಧಕರು ಅಧ್ಯಯನ ನಡೆಸುತ್ತಿದ್ದರು. ಮಲೇರಿಯ ರೋಗಾಣುಗಳು ಪ್ಲಾಸೆಂಟದ ಮೇಲೆ ದಾಳಿ ನಡೆಸುವುದರಿಂದ ಗರ್ಭಿಣಿಯರು ಭಾರೀ ಸಮಸ್ಯೆಗೆ ಗುರಿ ಯಾಗುತ್ತಿದ್ದರು. ಆದರೆ, ಅದೇ ವೇಳೆ ಮಲೇರಿಯ ಪ್ರೊಟೀನ್‌ಗಳು ಕ್ಯಾನ್ಸರ್ ವಿರುದ್ಧವೂ ದಾಳಿ ನಡೆಸಬಹುದು ಎಂಬುದನ್ನೂ ಅವರು ಪತ್ತೆಹಚ್ಚಿದರು. ಈ […]
↧