ಇಸ್ಲಾಮಾಬಾದ್, ಅ.16: ದಶಕದ ಹಿಂದೆ ಆಕಸ್ಮಿಕವಾಗಿ ಗಡಿದಾಟಿ, ಪಾಕಿಸ್ತಾನದಲ್ಲಿ ನೆಲೆಸಿದ್ದ ಕಿವುಡಿ ಹಾಗೂ ಮೂಕಿ ಭಾರತೀಯ ಯುವತಿ ಗೀತಾ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾಳೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಗೀತಾ ಭಾರತಕ್ಕೆ ಹಿಂದಿರುಗಲಿದ್ದಾಳೆಂದು ತಿಳಿಸಿದ್ದಾರೆ. ‘‘ ಗೀತಾ ಶೀಘ್ರದಲ್ಲೇ ಭಾರತಕ್ಕೆ ವಾಪಸಾಗಲಿದ್ದಾಳೆ. ನಾವು ಆಕೆಯ ಕುಟುಂಬವನ್ನು ಪತ್ತೆಹಚ್ಚಿದ್ದೇವೆ. ಡಿಎನ್ಎ ಪರೀಕ್ಷೆ ನಡೆಸಿದ ಬಳಿಕ ಆಕೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು’’ ಎಂದವರು ತಿಳಿಸಿದ್ದಾರೆ. ಗಡಿದಾಟಿ ಬಂದಿದ್ದ ಗೀತಾಳನ್ನು ಎದಿ ಪ್ರತಿಷ್ಠಾನದ ಮುಖ್ಯಸ್ಥೆ ಬಿಲ್ಕೀಸ್ […]
↧