ಹೃದಯಾಘಾತಗಳ ಬಗ್ಗೆ ಅತ್ಯಂತ ಮುಖ್ಯ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕೆಂಬುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಜೀವಮಾನದ ಅವದಿಯಲ್ಲಿ ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಹೃದಯಾಘಾತದ ಸಂಭವನೀಯತೆ ಹೆಚ್ಚಿಗಿರುತ್ತದೆ. ಎರಡನೆಯದಾಗಿ, ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ. ಹೃದಯಾಘಾತವೆಂದರೇನು? ಕೊರೋನರಿ ರಕ್ತನಾಳದಲ್ಲಿ ರಕ್ತಪರಿಚಲನೆಗೆ ತಡೆಯುಂಟಾಗಿ ಹೃದಯದ ಸ್ನಾಯು ಸಾವಪ್ಪುವುದೇ ಹೃದಯಾಘಾತ. ಕೋರೋನರಿ ರಕ್ತನಾಳದಲ್ಲಿ ಹರಳು ಶೇಖರಣೆಯಾಗಿ ರಕ್ತವು ಹೆಪ್ಪುಗಟ್ಟಿ(ಬ್ಲಡ್‌ಕ್ಲಾಟ್) ರಕ್ತದ […]
↧