ಮುಂಬೈ, ಅ.17: ಪಾಕಿಸ್ತಾನದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ 15 ವರ್ಷದ ಹುಡುಗಿಗೆ ಭಾರತೀಯರು ರೂ. 13 ಲಕ್ಷ ದೇಣಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಕರಾಚಿಯ ಸಾಬಾ ತಾರಿಖ್ ಅಹ್ಮದ್ ಎಂಬ ಹುಡುಗಿ ಪಾಕಿಸ್ತಾನದಿಂದ ಭಾರತಕ್ಕೆ 49 ದಿನಗಳ ಹಿಂದೆ ಬಂದಿದ್ದಳು. ತನ್ನ ಕಾಯಿಲೆಯೊಂದಕ್ಕೆ ಸಂಬಂಧಿಸಿ ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದಳು. ಭಾರತೀಯರ ಸಹಕಾರದಿಂದ ಗುಣಮುಖಳಾಗಿ ಈ ಹುಡುಗಿ ಇದೀಗ ತನ್ನ ತವರಿಗೆ ಹಿಂದಿರುಗಿದ್ದಾಳೆ. ದೇಹದೊಳಗೆ ತಾಮ್ರದ ಅಂಶವೊಂದು ಕ್ರೋಢೀಕರಣಗೊಂಡು ವಿಷಮಯವಾಗುವ ವಿಚಿತ್ರ ಕಾಯಿಲೆಗೆ ಆಕೆಗೆ ಚಿಕಿತ್ಸೆ ನೀಡಲಾಗಿದೆ. […]
↧