ಇಸ್ಲಾಮಾಬಾದ್: ಪೇಶಾವರದ ಶಾಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿ ನೂರಾರು ಮಕ್ಕಳ ಹತ್ಯೆಗೈದ ಪ್ರಕರಣಕ್ಕೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಇನ್ನೊಂದೆಡೆ ತಾಲಿಬಾನ್ ಉಗ್ರರಿಂದ ಇನ್ನಷ್ಟು ಮಕ್ಕಳನ್ನು ಕೊಲ್ಲುವ ಬೆದರಿಕೆಯೂ ಕೇಳಿಬಂದಿದೆ. ”ಉಗ್ರಗಾಮಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪಾಕ್ ಸರಕಾರ ಮುಂದುವರಿಸಿದರೆ ಪ್ರಧಾನಿ ನವಾಜ್ ಷರೀಫ್ ಅವರ ಕುಟುಂಬದವರೂ ಸೇರಿದಂತೆ ರಾಜಕಾರಣಿಗಳ ಹಾಗೂ ಸೇನಾಧಿಕಾರಿಗಳ ಮಕ್ಕಳನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ,” ಎಂದು ನವಾಜ್ ಷರೀಫ್ಗೆ ನೇರ ಎಚ್ಚರಿಕೆಯನ್ನು ತೆಹ್ರಿಕ್ ಇ ತಾಲಿಬಾನ್ನ ವಕ್ತಾರ ಮೊಹಮ್ಮದ್ ಖರಸಾನಿ ರವಾನಿಸಿದ್ದಾನೆ. […]
↧