ಬೀಜಿಂಗ್: ಹುಲಿಗಳನ್ನು ಕೊಂದು ತಿಂದ ಆರೋಪದಲ್ಲಿ ಚೀನಾದ ಉದ್ಯಮಿಯೊಬ್ಬನಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಚೀನಾದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ಕ್ಸು ಎಂಬಾತ ಗುವಾಂಗ್‌ಕ್ಸಿಯ ರಾಜಧಾನಿ ನಾನ್ನಿಂಗ್ ಪಟ್ಟಣದಲ್ಲಿರುವ ತನ್ನ ಹೋಟೆಲ್‌ನಲ್ಲಿ ಹುಲಿಮಾಂಸದ ಅಡುಗೆ ಮಾಡಿಸಿ 14 ಮಂದಿ ಸ್ನೇಹಿತರ ಜತೆಗೆ ಅದನ್ನು ಭಕ್ಷಿಸಿದ್ದ ಎಂದು ಕಿಂಝೌ ಸಿಟಿ ಇಂಟರ್‌ಮೀಡಿಯೇಟ್ ಪೀಪಲ್ಸ್ ಕೋರ್ಟ್ ಹೇಳಿದೆ. ಗುವಾಂಗ್ಡಾಂಗ್ ಪ್ರಾಂತ್ಯದ ಲೀಝೌನಲ್ಲಿರುವ ಲಾಂಗ್‌ಮೆನ್ ಟೌನ್‌ಶಿಪ್‌ನಲ್ಲಿ ಆರೋಪಿ ಕ್ಸು, 2013ರ ಮಾರ್ಚ್ 13ರಂದು ವಿದ್ಯುತ್ ಶಾಕ್ ನೀಡಿ ಹುಲಿಯೊಂದನ್ನು […]
↧