ಪಂಗ್‌ಕಲನ್ ಬುನ್, ಜ. 2: ಇಂಡೋನೇಷ್ಯಾದ ಏರ್‌ಏಷ್ಯಾ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ಒಟ್ಟು 30 ಮೃತ ದೇಹಗಳನ್ನು ಹೊರದೆಗೆದಿದ್ದಾರೆ. ಈ ಪೈಕಿ ಐದು ದೇಹಗಳು ವಿಮಾನದ ಆಸನಕ್ಕೆ ಬಿಗಿದುಕೊಂಡಿದ್ದ ಸ್ಥಿತಿಯಲ್ಲೇ ಪತ್ತೆ ಆಗಿವೆ ಎಂದು ಇಂಡೋನೇಷ್ಯಾದ ನೌಕಾ ಅಧಿಕಾರಿಯೊಬ್ಬರು ತಿಳಿಸಿದರು. ಇಂದು ಜಾವಾ ಸಮುದ್ರದಲ್ಲಿ ಪತ್ತೆಹಚ್ಚಲಾದ ಏಳು ಶವಗಳ ಪೈಕಿ ಐದು ಶವಗಳು ಆಸನಕ್ಕೆ ಬಿಗಿದ ಸ್ಥಿತಿಯಲ್ಲೇ ಕಂಡುಬಂದಿವೆ ಎಂದು ಯುದ್ಧ ನೌಕೆ ಬುಂಗ್ ಟೋಮೊದ ಕಮಾಂಡರ್ ಕರ್ನಲ್ ಯಯಾನ್ ಸೋಫಿಯಾನ್ ಹೇಳಿದರು. ವಿಮಾನ […]
↧