ಬೆಳಗಿನ ಹೊತ್ತು ಅಪ್ಪ-ಅಮ್ಮ ಇಬ್ಬರಿಗೂ ಕಚೇರಿಗೆ ಹೋಗುವ ಆತುರ. ಅವರಿಗೇ ಬ್ರಶ್ ಮಾಡಲು ಪುರುಸೊತ್ತಿಲ್ಲ. ಮೂರರ ಪೋರನಿಗೆ ಹಲ್ಲು ಉಜ್ಜಿಸುವ ತಲೆ ಭಾರ ಬೇರೆ!. ಬೇಡ ಬೇಡ ಎಂದು ಓಡುವ ತುಂಟನನ್ನು ಹಿಡಿಯುವವರಾರು? ಪರಿಣಾಮ ಈಗಾಗಲೇ ಮುದ್ದುಮುಖದ ಮಗುವಿನ ಹಾಲು ಹಲ್ಲುಗಳು ಹಾಳು! ‘ಹಲ್ಲು ಬ್ರಶ್ ಮಾಡಬೇಕು ಅಂದ್ರೆ ಕೇಳೋದೇ ಇಲ್ಲ, ಬೈದೂ ಬೈದೂ ಸಾಕಾಗಿದೆ. ಏನು ಮಾಡೋದು?’ ಇದು ಪುಟ್ಟ ಮಕ್ಕಳಿರುವ ಪೋಷಕರ ದೂರು. ನಿಜವೇ, ಸದಾ ಚಟುವಟಿಕೆಯಿಂದ ಅಲ್ಲಿ-ಇಲ್ಲಿ ಕುಣಿದಾಡುವ ಮಕ್ಕಳಿಗೆ ದಿನಕ್ಕೆರಡು ಬಾರಿ […]
↧