ಕಾಠ್ಮಂಡು: ನೇಪಾಳದಲ್ಲಿ ಏಪ್ರಿಲ್ 25 ರಂದು ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಲಕ್ಷಾಂತರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಭೂಕಂಪದಿಂದ ಬದುಕಿ ಬಂದವರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮುಂದಾಗಿರುವಾಗಲೇ ಚಳಿ ಅವರ ಬದುಕನ್ನು ಅಂತಂತ್ರಗೊಳಿಸಿದೆ. ನೇಪಾಳದಾದ್ಯಂತ ಕಳೆದ 1 ತಿಂಗಳಿಂದ ಚಳಿ ತೀವ್ರವಾಗುತ್ತಿದ್ದು, ಚಳಿಗಾಳಿಗೆ ಇದುವರೆಗೆ ಕನಿಷ್ಠ 22 ಜನರು ಮೃತಪಟ್ಟಿದ್ದು, ಸಾವಿರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಭೂಕಂಪನವಾಗಿ 7 ತಿಂಗಳು ಕಳೆದರೂ ನೇಪಾಳ ಸರ್ಕಾರ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿಫಲವಾಗಿದ್ದು, ಲಕ್ಷಾಂತರ ಜನರು ತಾತ್ಕಾಲಿಕ ಸೂರು ನಿರ್ಮಿಸಿಕೊಂಡು […]
↧