ವಾಷಿಂಗ್ಟನ್: ಮಿತವಿಲ್ಲದೇ ಅತಿಯಾಗಿ ತಿನ್ನುವುದು ಕೇವಲ ಬೊಜ್ಜು ಹೆಚಾಚಗಲು ಕಾರಣವಲ್ಲದೇ ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ವಾಷಿಂಗ್ಟನ್ ನ ಯಾಲೆ ವಿಶ್ವವಿದ್ಯಾನಿಲಯ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ಅತಿ ಹೆಚ್ಚು ಆಹಾರ ಸೇವಿಸಿದ ಇಲಿಗಳು ಖಿನ್ನತೆಯಿಂದ ಬಳಲುತ್ತಿರುವುದು ಸಾಬೀತಾಗಿದೆ. ಅತಿಯಾದ ಬೊಜ್ಜು ಆತಂಕವನ್ನು ಹೆಚ್ಚು ಮಾಡುವುದಲ್ಲದೇ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಿ, ಟೈಪ್-2 ಮಧುಮೇಹಕ್ಕೆ ಕಾರಣವಾಗುತ್ತದೆ.ಹೀಗಾಗಿ ನಾವು ತಿನ್ನು ಆಹಾರ ಹಿತಮಿತವಾಗಿದ್ದರೇ ಒಳ್ಳೆಯದು ಎಂಬುದನ್ನು ಸಂಶೋಧನೆ ತಿಳಿಸಿದೆ.
↧