ಸಿಯೋಲ್: ಪರೀಕ್ಷಾರ್ಥವಾಗಿ ನಡೆಸಿದ ‘ಹೈಡ್ರೋಜನ್ ಬಾಂಬ್’ ಸ್ಫೋಟ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದರೊಂದಿಗೆ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಯಲ್ಲಿ ಇನ್ನೂ ಒಂದು ಮಹತ್ವದ ಹೆಜ್ಜೆ ಮುಂದಿಟ್ಟಂತಾಗಿದೆ. ಹೈಡ್ರೋಜನ್ ಬಾಂಬ್ ಸ್ಫೋಟ ನಿಟ್ಟಿನಲ್ಲಿ ತನ್ನ ಮೊದಲ ಪರೀಕ್ಷೆಯಲ್ಲಿಯೇ ಫಲ ಸಿಕ್ಕಿರುವುದಾಗಿ ಪ್ರತಿಪಾದಿಸಿದೆ. ಉತ್ತರ ಕೊರಿಯಾ ಸ್ಪಷ್ಟನೆಗೂ ಮುನ್ನ ಭೂಕಂಪ ಸಂಭವಿಸಿತೆಂದು ನಂಬಲಾಗಿತ್ತು. ಪರೀಕ್ಷಾರ್ಥವಾಗಿ ಹೈಡ್ರೋಜನ್ ಬಾಂಬ್ ಸಿಡಿಸಿದ್ದರ ಪರಿಣಾಮ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ಮಾಹಿತಿ ನೀಡಿತು. […]
↧