ನವದೆಹಲಿ/ಇಸ್ಲಾಮಾಬಾದ್: ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಚೇರಿಗಳ ಮೇಲೆ ದಾಳಿ ನಡೆಸಿ 12ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದ ಪಾಕಿಸ್ತಾನ ಬೆಳಕು ಹರಿಯುವುದರೊಳಗೆ ಬಣ್ಣ ಬದಲಿಸಿದೆ. ಜೈಷ್ ಮುಖ್ಯಸ್ಥ ಮಸೂದ್ ಅಜರ್ ಬಂಧನವನ್ನು ಪಾಕ್ ಮಾಧ್ಯಮಗಳು ದೃಢೀಕರಿಸಿದ ನಂತರವೂ ಈ ವಿಚಾರದ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದು ಹೊಸ ನಾಟಕ ಆರಂಭಿಸಿದೆ. ಪಠಾಣ್ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆಯಾದರೂ ಪಾಕಿಸ್ತಾನದ ತನಿಖಾ ತಂಡ ಪಠಾಣ್ಕೋಟ್ಗೆ ಭೇಟಿಕೊಟ್ಟ […]
↧