ಖೈರೂಲ್, ಜ.18-ಸರ್ಕಾರದ ಪರವಿರುವ ಯಾರನ್ನೂ ಉಳಿಯಗೊಡಬಾರದೆಂದು ನಿಶ್ಚಯಿಸಿದಂತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು, ಹೆಚ್ಚಿನ ಸಂಖ್ಯೆಯ ಮಹಿಳೆಯರು, ಮಕ್ಕಳು ಸೇರಿದಂಥೆ ಸುಮಾರು 300ಕ್ಕೂ ಹೆಚ್ಚು ಜನರನ್ನು ಭೀಕರವಾಗಿ ಕತ್ತರಿಸಿ ಹಾಕಿದ್ದು, ಇದೇ ವೇಳೆ 450-500 ಮಂದಿ ನಾಗರಿಕರನ್ನು ಅಪಹರಿಸಿದ್ದಾರೆ. ಈ ಹಿಂದೆ ಮಾಡಿದಂತೆಯೇ ಇಸ್ಲಾಮಿಕ್ ಉಗ್ರರು ಅಪಹೃತರನ್ನೆಲ್ಲ ದಾರುಣವಾಗಿ ಹತ್ಯೆ ಮಾಡುವ ಮತ್ತು ಮಹಿಳೆಯರು, ಬಾಲಕಿಯರ ಮೇಲೆ ಪೈಶಾಚಿಕವಾಗಿ ಅತ್ಯಾಚಾರಗಳನ್ನು ನಡೆಸುವ ಸಾಧ್ಯತೆಗಳಿದ್ದು, ಅವರಾರೂ ಜೀವದಿಂದುಳಿಯುವ ನಿರೀಕ್ಷೆ ಇಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ರಮಿ ಅಬ್ದುಲ್ […]
↧