ಲಾಹೋರ್ (ಪಿಟಿಐ): ಪಠಾಣ್‌ಕೋಟ್ ಮೇಲಿನ ಉಗ್ರರ ದಾಳಿ ಘಟನೆ ಸಂಬಂಧ ಭಾರತದಿಂದ ಮತ್ತಷ್ಟು ಪುರಾವೆಗಳನ್ನು ಕೇಳುವುದಾಗಿ ಪಾಕಿಸ್ತಾನವು ಸೋಮವಾರ ಹೇಳಿದೆ. ಉಗ್ರ ದಾಳಿ ಘಟನೆಯ ತನಿಖೆಯ ಸಾರವನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಭಾರತದ ಬಳಿ ಮತ್ತಷ್ಟು ಸಾಕ್ಷ್ಯಗಳನ್ನು ಕೇಳುವಂತೆ ಕೋರಿ ವಿದೇಶಾಂಗ ಸಚಿವಾಲಯಕ್ಕೆ ಪಠಾಣ್‌ಕೋಟ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಆರು ಸದಸ್ಯರ ಪಾಕಿಸ್ತಾನಿ ತಂಡವು ಪತ್ರ ಬರೆದಿದೆ. ‘ಚೆಂಡು ಮತ್ತೆ ಭಾರತದ […]
↧