ವಾಷಿಂಗ್ಟನ್: ನಾಸಾದ ಬಾಹ್ಯಾಕಾಶ ನೌಕೆ ಸೂರ್ಯನ ಹತ್ತನೇ ಕೋಟಿಯ ಚಿತ್ರ ರವಾನಿಸಿದೆ. ಜನವರಿ 19ರಂದು ‘ಸೋಲಾರ್ ಡೈನಮಿಕ್ ಅಬ್ಸರ್ವೇಟರಿ’ ಬಾಹ್ಯಾಕಾಶ ನೌಕೆ ತನ್ನ ಹತ್ತನೇ ಕೋಟಿಯ ಚಿತ್ರವನ್ನು ಸೆರೆಹಿಡಿದಿದೆ. ಈ ಚಿತ್ರ 15 ಸಾವಿರ ಪಿಕ್ಸೆಲ್‌ನಷ್ಟು ಗರಿಷ್ಠ ರೆಸಲ್ಯೂಷನನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಸೂರ್ಯನ ಚಲನವಲನಗಳನ್ನು ವೀಕ್ಷಿಸುವ ಸಲುವಾಗಿ 2010ರಲ್ಲಿ ಉಡಾವಣೆ ಮಾಡಲಾದ ಈ ನೌಕೆ ನಾಲ್ಕು ದೂರದರ್ಶಕ ಹೊಂದಿದ್ದು, ಒಮ್ಮೆಗೆ 8 ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
↧