ನವದೆಹಲಿ: ಫ್ರಾನ್ಸ್ ನಲ್ಲಿ ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಸಿಖ್ ಸಮುದಾಯದ ಕಳವಳಕ್ಕೆ ಉತ್ತರಿಸಿರುವ ಫ್ರಾನ್ಸ್ ರಾಯಭಾರಿ ಕಚೇರಿ, ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಇರುವುದು ಬುರ್ಖಾ ತೊಡೂವುದಕ್ಕೆ ಮಾತ್ರ ಸಿಕ್ ಪೇಟಗಳಿಗೆ ಇಲ್ಲ ಎಂದು ಸ್ಪಷ್ಟೀಕರಿಸಿದೆ. “ಸಾರ್ವಜನಿಕ ಶಾಲೆಗಳಲ್ಲಿ ಹೊರತುಪಡಿಸಿ ಸಿಕ್ ಪೇಟವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ತೊಡಲು ಅವಕಾಶವಿದೆ. ಕೆಲವು ತೀವ್ರಗಾಮಿ ಸಂಘಟನೆಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಬುರ್ಖಾಗೆ ಮಾತ್ರ ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧವಿರುವುದು ಅದೂ ಕೂಡ ಭದ್ರತಾ ಕಾರಣಗಳಿಗೆ. “ಅಲ್ಲದೆ ಪೇಟ ತೊಟ್ಟ ಸಿಖ್ ಸಮುದಾಯದವರಾಗಲೀ, ಸಿಖ್ […]
↧