ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿರುವ ತನ್ನ ಸೇವಾ ವೇದಿಕೆಯ ರಕ್ಷಣೆಗೆ ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟ್ಟರ್, ಉಗ್ರ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದ್ದ ಆರೋಪದಡಿ 1.25 ಲಕ್ಷ ಖಾತೆಗಳನ್ನು ಅಮಾನತುಗೊಳಿಸಿದೆ. ಇದರಲ್ಲಿ ಬಹುತೇಕ ಖಾತೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟುಹೊಂದಿದ್ದವು. ಆದರೆ, ಭಾರತ ಕೇಂದ್ರೀತ ಭಯೋತ್ಪಾದನೆ ನಡೆಸುವ ಸಂಘಟನೆಗಳು ಹಾಗೂ ವೈಯಕ್ತಿಕ ಖಾತೆಗಳ ಮೇಲೆ ಈ ಸಾಮಾಜಿಕ ಜಾಲತಾಣ ಯಾವುದೇ ಕ್ರಮಕೈಗೊಂಡಿಲ್ಲ. ‘ಭಯೋತ್ಪಾದನಾ ಬೆದರಿಕೆಯ ಸ್ವರೂಪ ಬದಲಾಗಿದ್ದು, ಅಂತೆಯೇ ಈ ಸಂಬಂಧ ನಮ್ಮ ಕೆಲಸವೂ ಬದಲಾಗಿದೆ. […]
↧