ವಾಷಿಂಗ್ಟನ್, ಮಾ.4- ಇದೇ ಮೊದಲ ಬಾರಿಗೆ ಇಲ್ಲಿ ಖಾಸಗಿ ಹೂಡಿಕೆದಾರ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಸಂಸ್ಥೆಯ ಅತ್ಯಂತ ಪ್ರಮುಖ ಆಡಳಿತಾತ್ಮಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಸುನೀಲ್ ಸಬರ್‌ವಾಲ್ ಎಂಬ ಉದ್ಯಮಿಯನ್ನು ಅಮೆರಿಕ ಸೆನೆಟ್ ನೇಮಕ ಮಾಡಿದ್ದು, ಅವರು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
↧