ಕ್ಯಾಲಿಫೋರ್ನಿಯಾ: ಬಾಲ್ಟಿಮೋರ್ ನಿಂದ ಲಾಸ್ ಎಂಜಲೀಸ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಬಡಿದಾಡಿಕೊಂಡ ಘಟನೆ ಅಮೆರಿಕದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸ್ಪಿರೀಟ್ ಏರ್ ಲೈನ್ಸ್ ವಿಮಾನದಲ್ಲಿ ಮಹಿಳೆಯೊಬ್ಬಳು ಬೂಮ್ ಬಾಕ್ಸ್‌ನಲ್ಲಿ ಏರು ಧ್ವನಿಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದಳು ಎಂಬ ಕಾರಣಕ್ಕೆ ವಾಗ್ವಾದ ಪ್ರಾರಂಭವಾಗಿ ಹೊಡೆದಾಟದಲ್ಲಿ ಕೊನೆಗೊಂಡಿದೆ. ಮಹಿಳೆಯರು ಬಡಿದಾಡಿಕೊಂಡಿದ್ದನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆದ ಬಳಿಕ ಐವರನ್ನು ಪೊಲೀಸರು […]
↧