ವಿಶ್ವಸಂಸ್ಥೆ/ವಾಷಿಂಗ್ಟನ್(ಪಿಟಿಐ): ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್‌ಕೋಟ್ ಉಗ್ರರ ದಾಳಿ ರೂವಾರಿ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆಯ ಆರ್ಥಿಕ ದಿಗ್ಭಂಧನ ಹೇರಲು ಚೀನಾ ಅಡ್ಡಗಾಲು ಹಾಕಿದೆ. ಚೀನಾ ನಡೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಜರ್‌ನನ್ನು ‘ಭಯೋತ್ಪಾದಕ’ ಎಂದು ಘೋಷಿಸಿ, ವಿಶ್ವಸಂಸ್ಥೆಯ ದಿಗ್ಭಂಧನ ಹೇರಲು ಭದ್ರತಾ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ಆತ ಅರ್ಹತೆ ಹೊಂದಿಲ್ಲ ಎಂಬ ‘ತಾಂತ್ರಿಕ ತಡೆ’ಯನ್ನು ಚೀನಾ ಒಡ್ಡಿದೆ. ‘ಯಾರನ್ನಾದರೂ ಕಪ್ಪುಪಟ್ಟಿಗೆ ಸೇರಿಸಬೇಕಾದರೆ ಆತ ಮಾನದಂಡನೆಗಳಿಗೆ ತಕ್ಕ ಅರ್ಹತೆ ಹೊಂದಿರಬೇಕು’ ಎಂದು ವಿಶ್ವಸಂಸ್ಥೆಯಲ್ಲಿರುವ […]
↧