ಆಧುನಿಕ ಕಾಲದಲ್ಲಿ ಎಲ್ಲವೂ ಯಂತ್ರಮಯ. ಉತ್ಪಾದನಾ ವಲಯಕ್ಕೆ ಈಗಾಗಲೇ ರೊಬೋಟ್ಗಳು ಬಂದಿವೆ. ಸೇವಾ ಕ್ಷೇತ್ರಕ್ಕೂ ಬರುವ ಹಂತದಲ್ಲಿವೆ. ಇನ್ನುಳಿದದ್ದು ಕಚೇರಿ ಮತ್ತು ಮನೆ. ಅಲ್ಲಿಗೂ ರೊಬೋಟ್ಗಳು ಬರುವ ದಿನ ದೂರವಿಲ್ಲ. ಸಮೀಕ್ಷೆಯೊಂದರ ಪ್ರಕಾರ 2050ರ ವೇಳೆಗೆ ಗೃಹಿಣಿಯರ ಜಾಗಕ್ಕೂ ರೊಬೋಟ್ಗಳು ಬರಲಿವೆ. ಅಲ್ಲಿಗೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲಸಗಳನ್ನೆಲ್ಲ ರೊಬೋಟ್ ವಹಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ರೊಬೋಟ್ಗಳಿಂದಾಗಿ ಸಾಂಪ್ರದಾಯಿಕ ಗೃಹಿಣಿಯ ಕೆಲಸಗಳೆಲ್ಲ ಹೋಗಲಿವೆ. ಅಡುಗೆ ಮಾಡೋದು, ತರಕಾರಿ ತರುವುದು, ಇತರ ಶಾಪಿಂಗ್, ಮನೆ ಒರೆಸುವುದು, ಶುಚಿಗೊಳಿಸುವುದು ಇತ್ಯಾದಿಗಳನ್ನೆಲ್ಲ ರೊಬೋಟ್ […]
↧