ವಿಯೆಂಷಿಯಾನ್, ಸೆ.9: ಅತ್ಯಂತ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿ ಉತ್ತರ ಕೊರಿಯ ಏಷ್ಯಾ ಪ್ರಾಂತ್ಯದಲ್ಲಿ ಆತಂಕ ಸೃಷ್ಟಿಸಿರುವಾಗಲೇ, ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಬದ್ಧವಿರುವುದಾಗಿ ಭಾರತ ಮತ್ತು 18 ಸದಸ್ಯ ರಾಷ್ಟ್ರಗಳ ಪೂರ್ವ ಏಷ್ಯಾ ಶೃಂಗಸಭೆಯ ಇತರ ನಾಯಕರು ಮತ್ತೊಮ್ಮೆ ಸಾರಿದ್ದಾರೆ. ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟಗಳಲ್ಲಿ ಅಣ್ವಸ್ತ್ರ ಭಯೋತ್ಪಾದನೆ ವಿರುದ್ಧ ಹೋರಾಡಲು ಅಣ್ವಸ್ತ್ರ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿರುವ ಈ ದೇಶಗಳು ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮತ್ತು ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಒಕ್ಕೊರಲಿನ ಬೆಂಬಲ ನೀಡುವುದಾಗಿ ಪುನರುಚ್ಚರಿಸಿವೆ. ಲಾವೋಸ್ […]
↧