ಬೀಜಿಂಗ್: ಚೀನಾದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 73.1 ಕೋಟಿಗೆ ಏರಿಕೆಯಾಗಿದೆ. ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇ.53.2ರಷ್ಟು ಅಂತರ್ಜಾಲ ಬಳಸುವವರಿದ್ದು, ಇ–ಕಾಮರ್ಸ್ ಕ್ಷೇತ್ರವೂ ವಿಸ್ತರಿಸಿದೆ. ಚೀನಾ ಅಂತರ್ಜಾಲ ಸಂಪರ್ಕ ಮಾಹಿತಿ ಕೇಂದ್ರ(ಸಿಐಎನ್‌ಐಸಿ)ದ ಪ್ರಕಾರ, ದೇಶದ 69.5 ಕೋಟಿ ಜನ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಸಾಧಿಸುತ್ತಿದ್ದಾರೆ. ಜಗತ್ತಿನ ಅಂತರ್ಜಾಲ ಬಳಕೆದಾರರಲ್ಲಿ ಈಗಾಗಲೇ ಚೀನಾ ಮೊದಲ ಸ್ಥಾನದಲ್ಲಿದ್ದು, ಫೋನ್ ಬಳಸಿ ಅಂತರ್ಜಾಲದಲ್ಲಿ ಮಾಹಿತಿ ಹುಡುಕಾಟ ನಡೆಸುವುದು ವಾರ್ಷಿಕ ಶೇ.10ರಷ್ಟು ಏರಿಕೆ ಕಂಡಿದೆ. ಇನ್ನೂ ಮೊಬೈಲ್‌ನಿಂದ 46.9 ಕೋಟಿ ಜನ ಹಣ ಪಾವತಿ ಮಾಡುತ್ತಿದ್ದಾರೆ. […]
↧