ಪ್ಯಾರಿಸ್: ಯುರೋಪ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಗುರುವಾರ 50ಕ್ಕೂ ಹೆಚ್ಚು ಬಲಿಯಾಗಿದ್ದಾರೆ. ಉತ್ತರದಿಂದ ದಕ್ಷಿಣದ ಮೆಡಿಟರೇನಿಯನ್ ತೀರದವರೆಗಿನ ದೇಶಗಳು ಹಿಮಾ ವೃತವಾಗಿವೆ. ವರ್ಷಂಪ್ರತಿ ಈ ಅವಧಿಯಲ್ಲಿ ಯುರೋಪ್ ನಲ್ಲಿ ಹಿಮಪಾತ ಸಾಮಾನ್ಯವಾದರೂ, ಈ ಬಾರಿ ಅತ್ಯಧಿಕವಾಗಿದೆ. ಪೋಲಂಡ್‌ನಲ್ಲಿ ಹಿಮಗಡ್ಡೆ ಯಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಈ ವರ್ಷ ಪೋಲಂಡ್ ನಲ್ಲಿ 21 ಮಂದಿ ಹಿಮಪಾತದಿಂದ ಮೃತಪಟ್ಟಿದ್ದಾರೆ. ಹಿಮಪಾತ ಇದೇ ರೀತಿ ಮುಂದುವರೆದಲ್ಲಿ ಯುರೋಪ್ ನಾದ್ಯಂತ ವಿಮಾನ ಯಾನಕ್ಕೆ ತೀವ್ರವಾಗಿ ಅಡಚಣೆ ಉಂಟಾಗಲಿದೆ ಎಂದು ವರದಿಯಾಗಿದೆ.
↧