ಸೌತಾಂಪ್ಟನ್: ಅಪರೂಪದಲ್ಲಿ ಅಪರೂಪ ಎಂಬಂತೆ ಇಂಗ್ಲೆಂಡ್ನ ಸೌತಾಂಪ್ಟನ್ನಿಂದ ಡಬ್ಲಿನ್ಗೆ ತೆರಳಿದ್ದ ವಿಮಾನ ಜೇನು ಹುಳದಿಂದಾಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ಶನಿವಾರ ಫ್ಲೈಬಿ ಕಂಪೆನಿಗೆ ಸೇರಿದ್ದ ವಿಮಾನ ಟೇಕಾಫ್ ಆದ 10 ನಿಮಿಷದ ಒಳಗಡೆ ವಿಮಾನದ ರೆಕ್ಕೆಯಲ್ಲಿ ಏನೋ ತಾಂತ್ರಿಕ ದೋಷವಿದೆ ಎನ್ನುವುದು ಪೈಲೆಟ್ಗೆ ಗೊತ್ತಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೈಲೆಟ್ ವಿಮಾನವನ್ನು ಸೌತಾಂಪ್ಟನ್ವಿಮಾನ ನಿಲ್ದಾಣದಲ್ಲಿ ಕೂಡಲೇ ಇಳಿಸಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ನಿಲ್ದಾಣದಲ್ಲಿದ್ದ ತಂತ್ರಜ್ಞರು ಧಾವಿಸಿ ಪರಿಶೀಲಿಸಿದಾಗ ವಿಮಾನದ ಹೊರಗಡೆಯ ಒಂದು ಸಾಧನದ […]
↧