ಪೇಶಾವರ: ಅಚ್ಚರಿಯ ವಿದ್ಯಮಾನವೊಂದರಲ್ಲಿ ಇಟಲಿ ಮತ್ತು ಪಾಕಿಸ್ಥಾನದ ಉತ್ಖನನಕಾರರು 3 ಸಾವಿರ ವರ್ಷ ಹಳೆಯ ನಗರವೊಂದನ್ನು ಪತ್ತೆ ಹಚ್ಚಿದ್ದಾರೆ. ಪಾಕ್‌ನ ವಾಯವ್ಯ ಪ್ರಾಂತ್ಯದಲ್ಲಿ ಈ ಪ್ರಾಚೀನ ನಗರ ಪತ್ತೆಯಾಗಿದ್ದು, ಅದರಲ್ಲಿ ಹಳೆಯ ಹಿಂದೂ ದೇಗುಲದ ಅವಶೇಷಗಳು, ಅಲೆಕ್ಸಾಂಡರ್‌ನ ಕಾಲದ ಅವಶೇಷಗಳು ಪತ್ತೆಯಾಗಿವೆ. ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಬಾರಿಕೋಟ್ ತಾಲೂಕಿನಲ್ಲಿ ಅವಶೇಷಗಳು ಪತ್ತೆಯಾಗಿವೆ. ಈ ಪ್ರಾಂತ್ಯದಲ್ಲಿ ಈ ಮೊದಲು 5 ಸಾವಿರ ವರ್ಷ ಹಳೆಯ ನಾಗರಿಕತೆಯ ಅವಶೇಷಗಳು ಸಿಕ್ಕಿದ್ದು, ಪ್ರಾಚೀನ ನಾಗರಿಕತೆ ಅಧ್ಯಯನದ ಪ್ರಮುಖ ಸ್ಥಳವಾಗಿದೆ. […]
↧