ವುಹಾನ್: ಮಾರಣಾಂತಿಕ ಕೋವಿಡ್-19 ವೈರಸ್ ಆರಂಭವಾದ ಚೀನದ ವುಹಾನ್ ನಗರದಲ್ಲೀಗ ಸಾರ್ವಜನಿಕ ಸಾರಿಗೆ ಸೇವೆಗಳು ಮತ್ತೆ ಆರಂಭಗೊಳ್ಳುತ್ತಿವೆ. ಈ ಮೂಲಕ ಒಂಬತ್ತು ವಾರಗಳ ಲಾಕ್ ಡೌನ್ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದಂತಾಗಿದೆ. ಜನರು ಎಂದಿನಂತೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಸ್ತೆಗಳಿಯುತ್ತಿದ್ದಾರೆ. ಮಂಗಳವಾರದಿಂದ ಆರಂಭವಾಗುವಂತೆ ನೂರಕ್ಕೂ ಹೆಚ್ಚಿನ ಬಸ್ ರೂಟ್ ಗಳು ಪುನರಾರಂಭಗೊಂಡಿವೆ. ತೆರೆದ ಅಂಗಡಿಗಳು ಚೀನದ ಬಹುತೇಕ ನಗರಗಳು ತಮ್ಮ ಎಂದಿನ ಜನಜೀವನಕ್ಕೆ ತೆರೆದುಕೊಳ್ಳುತ್ತಿವೆ. ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲೀಗ ವಾಹನಗಳ ಸದ್ದು ಕೇಳಿಬರುತ್ತಿದೆ. ರೆಸ್ಟೋರೆಂಟ್ […]
↧