ಇಸ್ಲಾಮಾಬಾದ್, ಆ.29: ಶಾಂತಿಯತ್ನಗಳಿಗೆ ಭಾರತವು ಧಕ್ಕೆಯುಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಒಳಗೊಂಡಿರುವುದನ್ನು ಆಕ್ಷೇಪಿಸುವ ಮೂಲಕ ಭಾರತವು ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆಯನ್ನು ಪಣಕ್ಕೊಡ್ಡುತ್ತಿದೆ ಎಂದು ಪಾಕ್ ಗಂಭೀರ ಆರೋಪವನ್ನು ಮಾಡಿದೆ. ‘‘ಪ್ರಾದೇಶಿಕ ಶಾಂತಿಗೆ ಸಂಬಂಧಿಸಿ ಪಾಕಿಸ್ತಾನವು ಸ್ಪಷ್ಟ ಕಲ್ಪನೆಯನ್ನು ಹೊಂದಿದೆ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಬಯಸುತ್ತದೆ. ಆದರೆ ದುರದೃಷ್ಟವಶಾತ್, ಇತರ ರಾಷ್ಟ್ರಗಳು ನಮ್ಮಾಂದಿಗೆ ಇದೇ ರೀತಿಯಲ್ಲಿ ಸ್ಪಂದಿಸಲು ಮುಂದಾಗುತ್ತಿಲ್ಲ’’ ಎಂದು ಇಸ್ಲಾಮಾಬಾದ್‌ನಲ್ಲಿ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ ಆಂತರಿಕ ಸಚಿವ […]
↧