ಲಂಡನ್: ಕ್ಯಾನ್ಸರ್ ಮೂಲವನ್ನು ಪತ್ತೆ ಹಚ್ಚುವ ತಾಂತ್ರಿಕತೆಯಲ್ಲಿ ಮಹತ್ವದ ಸಂಶೋಧನೆಯೊಂದು ಹೊರಬಿದ್ದಿದ್ದು, ಡೆನ್ಮಾರ್ಕ್ನ ಸಂಶೋಧಕರು ಕ್ಯಾನ್ಸ್ರ್ನ ಮೂಲವನ್ನು 2 ದಿನಗಳಲ್ಲಿ ಪತ್ತೆ ಹಚ್ಚುವ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿರುವುದಾಗಿ ತಿಳಿಸಿದ್ದಾರೆ. ಈ ಹೊಸ ತಂತ್ರಜ್ಞಾನದಿಂದ ವೈದ್ಯರು ಶೀಘ್ರವಾಗಿ ಕ್ಯಾನ್ಸರ್ನ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಪಿತ್ತಜನಕಾಂಗ, ಶ್ವಾಸಕೋಶ ಮತ್ತಿತರ ಕ್ಯಾನ್ಸರ್ಗಳ ಮೂಲವನ್ನು ತ್ವರಿತವಾಗಿ ಶೋಧಿಸಲು ಅನುಕೂಲವಾಗಲಿದೆ. ಪ್ರಸ್ತುತ ವೈದ್ಯರು ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಆದರೆ ಹಲವು ರೋಗಿಗಳಲ್ಲಿ ತ್ವರಿತವಾಗಿ ಕ್ಯಾನ್ಸರ್ ಮೂಲ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. […]
↧