* ಇಂದು ಇಡೀ ಸಮಾಜವನ್ನು ಆಳುತ್ತಿರುವುದು ಯಾವುದು ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಮೊದಲ ಉತ್ತರವೇ ಸೌಂದರ್ಯ. ಚೆಂದ ಕಾಣಿಸಬೇಕೆಂಬುದು ಇಂದು ಪ್ರತಿಯೊಬ್ಬರ ಆಶಯ. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಯುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಬ್ಯೂಟಿ ಪಾರ್ಲರ್ಗಳು, ಬ್ಯೂಟಿ ಕ್ಲಿನಿಕ್ಗಳು ಇಂದು ಬೃಹದಾಕಾರವಾಗಿ ತಲೆಯೆತ್ತಿ ನಿಂತಿವೆ. ಇವುಗಳಲ್ಲದೆ ಬ್ಯೂಟಿ ಚಿಕಿತ್ಸೆಗಳು, ಸರ್ಜರಿಗಳು ಕೂಡ ಜನಪ್ರಿಯವಾಗುತ್ತಿವೆ. ಸೌಂದರ್ಯ ಕಾಪಾಡುವುದಷ್ಟೇ ಅಲ್ಲ, ಎಲ್ಲರೂ ಚಿರಯೌವ್ವನಿಗರಾಗಿಯೇ ಇರಬೇಕೆಂಬ ಹಂಬಲ ಕೂಡ ಇಂದು ಎಲ್ಲರನ್ನೂ ಕಾಡುತ್ತಿದೆ. ಸೌಂದರ್ಯ ಮತ್ತು ಯೌವ್ವನದ ಬೆನ್ನಬಿದ್ದಿದೆ ಇಂದಿನ ಸಮಾಜ. […]
↧